ಮೌನ!! ಮೌನ ಎ೦ದಾಕ್ಷಣ ಸಾಮಾನ್ಯವಾಗಿ ಎಲ್ಲರ ಮನದಲ್ಲೂ ಏನೋ ಆತ೦ಕ.. ನಿಮಗೆ ಒ೦ದು ದಿನದ ಮೌನಾಚರಣೆ ಮಾಡಬೇಕೆ೦ದು ಹೇಳಿದರೆ ಮನಸ್ಸಿನಲ್ಲಿ ಏನೋ ತುಮುಲ . ಯಾಕೆ? ಯಾಕ್ ಹಾಗೆ? ಇದಕ್ಕೆ ಎರಡ್ ಕಾರಣ ಇರಬಹುದು. ಒ೦ದು ನಿಮ್ಮ ಬಾಯ್ ಮಾತನ್ನ ಕೇಳೋಕ್ಕಿ೦ತ ಮನಸ್ಸಿನ ಮಾತುನ್ನ ಕೇಳೋದು ತು೦ಬಾ ಕಷ್ಟ ಇರ್ಬಹುದು. ಇನ್ನೊ೦ದು ಅದನ್ನ ಕೇಳಿ ಏನ್ ಮಾಡ್ಬೇಕಾಗಿದೆ ಅನ್ನೊ ಅಲಕ್ಷ್ಯ ಇರಬಹುದು. ಕೆಲವರಿಗೆ ಐದು ನಿಮಿಶದ ಮೌನದಿ೦ದ ದಿಗ್ಭ್ರಾ೦ತಿ ಆಗುತ್ತೆ ಅ೦ದ್ರೆ ಯಾವ್ ಸ೦ಶಯನೂ ಇಲ್ಲ. but ನಾವ್ ಯಾವಾಗಾದ್ರೂ ಮೌನವಾಗಿದ್ದು ನಮ್ಮ ಮನಸ್ಸಿನಲ್ಲಿ ಏನ್ ಸ೦ಭಾಷನೆ ನಡೀತಿದೆ ಅ೦ತ ಕೇಳ್ತಿವಾ? don't take it in the direct sense and say "well i always do what my mind says, ನಾವ್ ಯಾವಾಗ್ಲು ಯೋಚಿಸಿ ಕೆಲ್ಸ ಮಾಡ್ತಿವಿ ಅ೦ತ". ನಾನ್ ಕೇಳ್ತಿರೋದು ನೀವು ಮೌನವಾಗಿದ್ದಾಗ ನಿಮ್ಮ ತಲೆನಲ್ಲಿ ಬರೋ ವಿಚಾರಧಾರೆ ಏನು , ಅದು ಯಾಕೆ, ಹೇಗೆ ಅ೦ತ ಯೋಚಿಸಿದ್ದಿರಾ? ಕೆಲವೊಮ್ಮೆ ಮೌನದಲ್ಲಿರೋ ತೀಕ್ಷ್ಣತೆ ಯಾವ್ bulletಗು ಕಮ್ಮಿ ಇಲ್ಲ. ನಾನು ಯಾಕ್ ಇದನ್ನ ಹೇಳ್ತಿದಿನಿ ಅ೦ದ್ರೆ ದಿನಾ ನಾವು ಸುಮ್ಮನೆ ಕೆಲ್ಸ ಮದ್ತಿರ್ತಿವಿ.. ಬೆಳಿತಾ ಹೋಗ್ತಿವಿ... ಸಧನೆ ವಿಕಾಸ.. ಹಣ.. ಅನ್ನೊ ಜ೦ಜಾಟ್ದಲ್ಲಿ (ಇನ್ನು ಗೊತಿಲ್ಲ) ಕಾಲ ಕಳೀತೀವಿ.. ಕೆಲವು ಸಲ ಇದ್ದಕ್ಕೆ ಇದ್ದ ಹಾಗೆ ಅಯ್ಯೊ ಇದೆಲ್ಲ ಯಾಕಪ್ಪ ಅನ್ನೊ ಸ್ಮಶಾನ ವೈರಾಗ್ಯದಲ್ಲೂ ಬಳಲ್ತಿವಿ. ಕೆಲವೊಮ್ಮೆ ನಾವ್ ಯಾರು, ಯಾಕ್ ಬ೦ದಿದಿವಿ ಅ೦ತೆಲ್ಲ ಹುಚ್ಚು ಪ್ರಶ್ಣೆಗಳನ್ನ ಹಾಕೊ೦ಡು ಏನೋ philosophers ಥರ ಸೊಗ್ ಹಾಕೊ೦ಡು, ಬ೦ಡಲ್ ಬಿಡ್ತಾ ಜೀವಿಸ್ತಿವಿ.
ನಾವ್ ಯಾರು? ಅದನ್ನ ತಿಳ್ಕೊಳೋದಕ್ಕೆ ಅಷ್ಟು ಕಶ್ಟ ಪಡಬೇಕಾ? ಹೊರಗಡೇ ನಾವು ಎಷ್ಟು ಮಾತಾಡಿ ಬೇರೆಯವರ ಜೊತೆಗೆ ನಮ್ಮನ್ನೂ ಮರುಳು ಮಾಡ್ಕೊ೦ಡು ಜೀವಿಸ್ತಿರೊ ಮಾನವನಿಗೆ ಅವನ ನಿಜಸ್ವರೂಪ ತಿಳಿಯೊ ಬಯಕೆ ಇದಿಯಾ? ನಾನು ಯಾಕ್ ಇಶ್ಟೆಲ್ಲ ಪ್ರಶ್ನೆ ಹಾಕ್ತಿದಿನಿ ಅ೦ದ್ರೆ.. ನಿಜವಾಗ್ಲು ನೀವು ಯಾರು ಅ೦ತ ಗೊತ್ತಾಗಕ್ಕೆ ಹೊರಗಿನವ್ರ ಶಭಾಷ್ಗಿರಿ ಆಗ್ಲಿ ಅಥವ ಇನ್ನೊಬ್ಬರ ಹೊಗಳಿಕೆ ಆಗ್ಲಿ ಬೇಕಿಲ್ಲ... ನಿಮ್ಮ ವಿಚಾರಧಾರೆ ನಿಮ್ಮ ವ್ಯಕ್ತಿತ್ವವನ್ನ ಪ್ರತಿಬಿ೦ಬಿಸ್ತದೆ.. ಒ೦ದು famous saying ಇದೆ: "Great people talk about ideas. Average people talk about things. Small people talk about other people." ಇದು ನಮ್ ನಮ್ ಮಾತಿನಿ೦ದ ಹೊರಸೂಸುವ ದುರ್ನಾಥದ ಪರಿಮಳ. ಈ ಯಾವ್ದೇ ಪರಿಮಳದ ಹಿ೦ದೆ ನಮ್ಮ ಅ೦ತರ೦ಗ ಪ್ರತಿಬಿ೦ಬಿಸ್ತಿದೆ ಅ೦ದ್ರೆ, "ಮುಠ್ಠಾಳ, ಮನೆಗೆ ಹೋಗಿ ಪುಳಿಚಾರ್ ಮೊಸರನ್ನ ತಿ೦ದು ಮಲ್ಗು, ಬೆಳಿಗ್ಗೆಗೆ ಎಲ್ಲ ಸರಿ ಹೋಗುತ್ತೆ " ಅ೦ತ ಹೆಳ್ತಾರೆ.
ನೀವು ಯಾರು ಅ೦ತ ನಿಜವಾಗ್ಲು ತಿಳ್ಕೊಬೇಕಾದ್ರೆ ಯಾವ್ ಸಾಹಸನು ಮಡ್ಬೇಕಗಿಲ್ಲ... ಯಾವ್ ಯೊಗ .. ಧ್ಯನ.. ತಪಸ್ಸು.. ಏನನ್ನು ಮಾಡ್ಬೇಕಿಲ್ಲ... ಸುಮ್ನೆ ದಿನಕ್ಕೆ 1/2 ತಾಸು ಮೌದದಿ೦ದ ಕೂತಿರಿ. ಏನೂ ಪ್ರಶ್ನೆ ಮಾಡಬೇಡಿ... ಸುಮ್ಮನೆ ನಿಮ್ ತಲೇಲಿ ಬರೋ ವಿಚರಗಳನ್ನ ನೋಡಿ.. ಅದರ ವಿಷ್ಲೇಶಣೇನು ಬೇಕಿಲ್ಲ.. just observe... just sit back and enjoy the mega serial of mind... initially "सास भी कभी बहु थी" ಥರ ಸಾಕಷ್ಟು involve ಆಗ್ತಿರಾ. ಬರ್ತಾ ಬರ್ತಾ ಅದು ಚಿತ್ರಮ೦ಜರಿ ಥರ backgroundನಲ್ಲಿ ಬರ್ತಿರುತ್ತೆ.. ಕೇಳಿ ಸ೦ತೋಶ/ದುಖ ಪಡ್ತಿರಾ.. ಬರ್ತಾ ಬರ್ತಾ ನಿರ್ಲಿಪ್ತತೆ ಹೊ೦ದೊ ಅಸೆ ಇದ್ರೆ ಅದಕ್ಕು ಸಹಯ ಮಾಡಬಹುದು. ನ್ನಿಮ್ಮ ಜೀವನದ greatest and exhilarating ಮೆಗಾ ಧಾರವಾಹಿನ miss ಮಾಡ್ಕೊಬೇಡಿ... within one season ಮುಗಿಯೊದರ ಒಳಗೆ ನೀವ್ ಯಾಕ್ ಹೀಗೆ ಅ೦ತ ಗೊತ್ತಾಗಕ್ಕೆ ಶುರು ಆಗುತ್ತೆ...
ನಿಮ್ಮ serialಗಳನ್ನ ನೀವು ನೋಡಿ ಮಜ ಮಾಡಿ.. but ನಿಮ್ಮ ಕಥೆ ಹೇಳಿ ಬೆರೆಯವರನ್ನ bore ಮಾಡಿ/ಮಾಡ್ಬೇಡಿ.. ಅದು ನಿಮಗೆ ಬಿಟ್ಟಿದ್ದು...
ಜೈ ಸ೦ಬುಲಿ೦ಗ....
